Membership details
2024 1NGO DIGITAL AWARD CERIFICATE
An integrated approach to build a equitable and empowered society
OUR VISION
We envision a world of hope, tolerance and social justice, where poverty has been overcome and people live in dignity and security.
OUR MISSION
SKKS's mission is to serve the poorest communities, promote innovative solutions, advocate for global responsibility, and drive lasting change through self-help capacity building and economic opportunities.
ಉದ್ಘಾಟನೆ . ಅರ್ಪಿತ ಹರೀಶ್ ಕುಮಾರ್ ,(ವಕೀಲರು) ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. (ರಾಜಕೀಯ ಹಾಗು ಮಹಿಳೆಯರ ಭದ್ರತೆ ತಿಳಿವಳಿಕೆ) ಮುಖ್ಯ ಅತಿಥಿಗಳು ಯತೀಶ್ ಕುಮಾರ್.ಟಿ.ಎಂ.ಸಿ ಸಂಸ್ಥಾಪಕರು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (R). (ಹೋರಾಟ ಮತ್ತು ಸಾಮಾಜಿಕ ತಿಳುವಳಿಕೆ) ಹರೀಶ್ ಕುಮಾರ್, ಸುಗ್ಗನಹಳ್ಳಿ. ವಕೀಲರು ಹಾಗು ರಾಜ್ಯ ಸಂಘಟನಾ ಕಾನೂನು ಕಾರ್ಯದರ್ಶಿಗಳು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (R). (ಕಾನೂನು ತಿಳುವಳಿಕೆಯ) ವಿನಯ್ ಕುಮಾರ್.ಸಿ ಜಿಲ್ಲಾ ಅಧ್ಯಕ್ಷರು, ರಾಮನಗರ ಜಿಲ್ಲೆ. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R). (ಸಾಮಾಜಿಕ ತಿಳುವಳಿಕೆ). ಗಿರೀಶ್ ಪ್ರಸಾದ್.ಜಿ. ರಾಜ್ಯ ಸಂಘಟನಾ ಕಾರ್ಯದರ್ಶಿ, ಮಾಹಿತಿ ಹಕ್ಕು ವಿಭಾಗ. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R)
ಮಾನ್ಯ ವಿಧಾನಸಭೆ ಸಭಾಧ್ಯಕ್ಷರು ಅನುಮತಿ ನೀಡದ ಮೇಲೆ, ದಿನಾಂಕ 10/07/2023 ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಮೇಲಿನ ಚರ್ಚೆಯನ್ನು ಶ್ರೀ ಶಾರದ PU ಕಾಲೇಜ್ ವಿಧ್ಯಾರ್ಥಿಗಳಿಗೆ ವಿಕ್ಷಿಸಲು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R) ವತಿಯಿಂದ ವ್ಯವಸ್ಥೆ ಮಾಡಿಕೊಡಲಾಯಿತು.
2022-23 ರ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಾಲ ಸೌಲಭ್ಯಕಕಾಗಿ ಆಯ್ಕೆಯಾದ ಫಲನುಭವಿಗಳಿಗೆ ಚುನಾವಣೆಯ ನಿಮಿತ್ತ ತಡೆ ನೀಡಿದ ವಿಚಾರವಾಗಿ ತಿಳಿಸಿ ತಡೆಯನ್ನು ಹಿಂಪಡೆದು ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗಾಗಿ ಸಾಲದ ಹಣ ಅವರ ಖಾತೆಗಳಿಗೆ ವರ್ಗಹಿಸ ಬೇಕು ಎಂದು ಮನವಿ ಮಾಡಲಾಯಿತು.
ಸಮಗ್ರ ಕರ್ನಾಟಕ ಕಾರ್ಮಿಕ ಸಂಘ NGOದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮದ ಗ್ರಂಥಾಲಯಕ್ಕೆ ಗಡಿಯಾರ ಉಡುಗೊರೆ ನೀಡಲಾಯಿತು ಗ್ರಂಥಾಲಯ ಮೇಲ್ವಿಚಾರಕ ಸತೀಶ್ ರವರು, ರಾಮನಗರ ಜಿಲ್ಲಾಧ್ಯಕ್ಷರಾದ ವಿನಯ್, ಮಹಿಳಾ ಘಟಕದ ಅಧ್ಯಕ್ಷರಾದ ಕೋಮಲ, ಕಾರ್ಯದರ್ಶಿಗಳಾದ ಮಹೇಶ್ ಗುರು ಉಪಸ್ಥಿತರಿದ್ದರು.
ದಿನಾಂಕ -17/03/2024ರಂದು ಮಹಿಳಾ ದಿನಾಚರಣೆ 2023-24ನೇ ಸಾಲಿನ ಪ್ರಯುಕ್ತ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರಿಗೆ ಚಿ.ನ. ಮಂಗಳ ಪ್ರಶಸ್ತಿ ಪ್ರಧಾನ ಸಮಾರಂಭ. ಪ್ರಶಸ್ತಿಗೆ ಆಯ್ಕೆ ಅದ ಮಹಿಳಾ ಸಾಧಕರು.
2024-25ನೇ ಸಾಲಿನ ವಾರ್ಷಿಕ ಸಂಘಟಿತ ವಲಯದ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ. ಅಧ್ಯಕ್ಷತೆ, ಶ್ರೀ ಹೆಚ್. ಎನ್. ಗೋಪಾಲಕೃಷ್ಣ ರವರು.(I.A.S). ಕರ್ನಾಟಕ ಕಾರ್ಮಿಕ ಇಲಾಖೆ ಆಯುಕ್ತರು. ಶ್ರೀ ಅಂಜನೇಯ ಟಿ. ರವರು, ಕರ್ನಾಟಕ ಕಾರ್ಮಿಕರ ಕಲ್ಯಾಣ ಇಲಾಖೆ ಆಯುಕ್ತರು. ಶ್ರೀ ಯತೀಶ್ ಕುಮಾರ್ ಟಿ ಎಂ ಸಿ. ಸಂಸ್ಥಾಪಕರು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ರಿ. ದಿನಾಂಕ 01-09-2024, ಸಮಯ ಬೆಳಿಗ್ಗೆ 9.00ಘಂಟೆಗೆ, ಸ್ಥಳ - ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ. ಮೈಸೂರು ರಸ್ತೆ, ಬ್ಯಾಟರಾಯನಪುರ , ಬೆಂಗಳೂರು -560026
ದಿನಾಂಕ 14-12-2024ರಂದು ಕೆಲಸ ಮಾಡುವಾಗ ವಿದ್ಯುತ್ ಅವಗಗಡದಲ್ಲಿ ಸಾವನಪ್ಪಿರುತ್ತಾರೆ, ನಮ್ಮ ಸಂಘಟನೆಯ ವತಿಯಿಂದ ದೂರು ನೀಡಿ 1 ತಿಂಗಳಾದರೂ ಕ್ರಮ ಕೈಗೊಂಡಿರುವಿದ್ದಿಲ್ಲ, ಮುಂದುವರೆದು ದಿನಾಂಕ 24-01-2025 ರಂದು ರಾಮನಗರ ಜಿಲ್ಲೆಯ ಪದಾಧಿಕಾರಿಗಳು ಬೆಸ್ಕಾಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಮಟೆ ಚಳುವಳಿ ಮತ್ತು ಪ್ರತಿಭಟನೆ ಮಾಡಿ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಂಘಟಿತ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸಂಘಟಿತ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ : ವಿಶ್ವ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಕಾರ್ಮಿಕ ಮಂಡಳಿ ಮತ್ತು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ವತಿಯಿಂದ ಬಿಡದಿ ಕೈಗಾರಿಕೆ ಪ್ರದೇಶದ ಲೂಮ್ಯಾಕ್ಸ್ ಕೈಗಾರಿಕೆಯ ಸಂಘಟಿತ ಕಾರ್ಮಿಕರಿಗೆ ಮತ್ತು ಇತರ ಕಾರ್ಮಿಕರಿಗೆ “ಕಾರ್ಮಿಕ ದಿನಾಚರಣೆಯ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ ಹಾಗೂ ಸಂಘಟಿತ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಮನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಎ ಇಕ್ಬಾಲ್ ಹುಸೇನ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ‘ ಎಲ್ಲಾ ಸಂಘಟಿತ ಕಾರ್ಮಿಕರು ಇಲಾಖೆಯ ಕಾರ್ಮಿಕರ ಕಾರ್ಡುಗಳನ್ನು ಮಾಡಿಕೊಂಡು, ಅದರಲ್ಲಿ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ, ಪಿ.ಯು.ಸಿ.ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿರುವುದು ಶ್ಲಾಘನೀಯ ಎಂದು ಹೇಳಿದರು, ಕಾರ್ಮಿಕ ಇಲಾಖೆಯಲ್ಲಿರುವ ಎಲ್ಲಾ ಯೋಜನೆಗಳ ಮಾಹಿತಿ ನೀಡಿ ಅರ್ಹ ಪಲಾನುಭವಿಗಳಿಗೆ ಇಲಾಖೆಯಿಂದ ಸಿಗುವ ಸವಲತ್ತು ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು, ಮುಖ್ಯ ಅತಿಥಿಗಳಾಗಿ ಕಟ್ಟಡ ನಿರ್ಮಾಣ ಕಾರ್ಮಿಕ ಮಂಡಳಿಯ ಸದಸ್ಯರಾದ ಹೆಚ್ ಜಿ ರಮೇಶ್ ಕುಣಿಗಲ್ ಮಾತನಾಡಿ ಬಾಲ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಬಾರದು. ಕಾರ್ಮಿಕರು ಕೆಲಸಕ್ಕೆ ಹೋಗುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು, ಚಾಲನಾ ಪರವಾನಗಿ ಇಟ್ಟುಕೊಂಡು ತಮ್ಮ ವಾಹನಗಳನ್ನು ಚಲಾಯಿಸಬೇಕು ಎಂದು ಕರೆ ನೀಡಿದರು. ಸುಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಪಿತ ಮಾತನಾಡಿ ಕಾರ್ಮಿಕ ಕಾಯಿದೆಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘಟಿತ ಕಾರ್ಮಿಕರ 10 ಮಕ್ಕಳನ್ನೂ ಸನ್ಮಾನಿಸಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷ ಯತೀಶ್ ಟಿ.ಎಂ.ಸಿ ರವರು ಮಾತನಾಡಿ ಸಂಘಟಿತ ಕಾರ್ಮಿಕರ ಯೊಗ ಕ್ಷೇಮವನ್ನು ಆಯ ಕೈಗಾರಿಕೆ ಮುಖ್ಯಸ್ಥರು ಮುತುವರ್ಜಿವಹಿಸಿ ಕಾರ್ಮಿಕರಿಗೆ ಆಗಾಗ್ಗ ಇಂತಹ ವೈದ್ಯಕೀಯ ತಪಾಸಣೆಯ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಮಿಕರ ಆರೋಗ್ಯಕ್ಕೆ ಆದ್ಯತೆ ನೀಡಿ ಅವರ ಮಕ್ಕಳಿಗೂ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸುಮಾರು 300 ಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ವೈದ್ಯಕೀಯ ಆರೋಗ್ಯ ತಪಾಸಣೆ ಪಡೆದರು. ಮುಖ್ಯ ಅತಿಥಿಗಳಾಗಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಪತ್ ಕುಮಾರ್, ಸಹಕಾರ ರತ್ನ ಪುರಸ್ಕೃತರಾರ ಎಂ.ಆರ್.ರಾಜಶೇಖರ್, ಸ್ಮಾರ್ಟ್ ಕಂಪನಿ ಹೆಚ್ ಆರ್, ಮಾದೇಶ್.ಸಿ, ಬಿಡದಿ ಉದ್ಯಮಿ ಆನಂದಣ್ಣ, ವಕೀಲರಾದ ಹರೀಶ್ ಕುಮಾರ್. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ 17-07-2025 ರಂದು ಗುರುವಾರ ಚನ್ನಪಟ್ಟಣ ಶ್ರೀ ಶಿವಸಾರಥಿ ಬಸವಣ್ಣನವರ ಸಾನಿಧ್ಯದಲ್ಲಿ ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾ ರಂಗವನ್ನು ಅಧಿಕೃತವಾಗಿ ಸೇರುತ್ತಾ " ಕರುನಾಡ ದೀಪ " ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು . ಸ್ಥಳ : ದೊಡ್ಡ ಗಣಪತಿ ದೇವಸ್ಥಾನ ಬಸವನಗುಡಿ, ಬೆಂಗಳೂರು.
ದಿನಾಂಕ 21/12/2025 ರಂದು 2025-26 ನೇ ಸಾಲಿನ ಸಂಘಟಿತ ಕಾರ್ಮಿಕರ ವಾರ್ಷಿಕ ಕ್ರೀಡಾ ಕೂಟವನ್ನು (ವಾಲಿಬಾಲ್ ಪಂದ್ಯಾವಳಿ) ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ಮಾನ್ಯ ರವಿ ಸುಬ್ರಮಣ್ಯ ರವರು ಆಗಮಿಸಿ ಕ್ರೀಡಾ ಜ್ಯೋತಿ ಪಡೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
DONATE NOW!
Make a generous donation to help us reach more beneficiaries.
Account Number: XXXXXX1252
Bank: STATE BANK OF INDIA
Branch: GIRINAGARA, BANGALORE
IFSC Code: SBIN0016222
All donations are eligible for tax savings under 80G.
VOLUNTEER WITH US
Volunteer with us for making a difference in somebody's life and also it is a good opportunity for you to give back to the society. For more information, mail us at [email protected]
NO-287, 1ST FLOOR, GALI ANJANNEYYA SWAMI TEMPAL TRUST BUILDING, MYSORE ROAD, OPP-GALI ANJANNEYYA TEMPAL, BYATARAYANAPURA, BANGALORE-560026
+91 8792210666 / 8792003777